ಬಿಳಿನೆಲೆ ಕೈಕಂಬ ಗ್ರಾಮದ ಅಭಿವೃದ್ಧಿಗಾಗಿ ದತ್ತು ಸ್ವೀಕಾರ.

ಸುಬ್ರಹ್ಮಣ್ಯ ನ.17: ಸುಬ್ರಹ್ಮಣ್ಯದ ಕೆ ಎಸ್ ಎಸ್ ಕಾಲೇಜಿನ ಎನ್ ಎಸ್ ಎಸ್ ಘಟಕ ವು ಬಿಳಿನೆಲೆ ಕೈಕಂಬ ಗ್ರಾಮವನ್ನು ದತ್ತು ಗ್ರಾಮ ವಾಗಿ ಸ್ವೀಕರಿಸಿದ್ದು, ಇದರ ಮೊದಲ ಕಾರ್ಯಯೋಜನೆ ಇಂದು ಚಾಲನೆಗೊಂಡಿದ್ದು ದತ್ತುಗ್ರಾಮ ಸ್ವಿಕಾರದ ಉದ್ಘಾಟನಾ ಸಮಾರಂಭವು ಇಂದು ನಡೆಯಿತು.
 ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷ ರಾದ ಶಾರದ ದಿನೇಶ್ ವಹಿಸಿದ್ದರು. ಉದ್ಘಾಟನೆ ಯನ್ನು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸುಧಿರ್ ಕುಮಾರ್ ಶೆಟ್ಟಿ ನೆರೆವೇರಿಸಿದರು. ಮುಖ್ಯ ಅತಿಥಿಗಳಾಗಿ ಗ್ರಾ.ಪಂ ಸದಸ್ಯರಾದ ಮುರಳಿಧರ ಎರ್ಮಾಯಿಲ್ , ಭವ್ಯ ಕುಕ್ಕಾಜೆ , ಬಿಳಿನೆಲೆ ಕೈಕಂಬ ಯುವಕ ಮಂಡಲ ಅಧ್ಯಕ್ಷ ಶಿವಪ್ರಸಾದ್ ನಡುತೋಟ, ಪೂರ್ವ ಅಧ್ಯಕ್ಷ ವಿಜಯ ಕುಮಾರ್ ನಡುತೋಟ, ಕೆ ಎಸ್ ಎಸ್ ಕಾಲೇಜಿನ ಐ ಕ್ಯು ಐ ಸಿ ಘಟಕದ ಸಂಯೋಜಕರಾದ ಲತಾ ಬಿ ಟಿ . ಎನ್ ಎಸ್ ಎಸ್ ಸಂಯೋಜಕರಾದ ಶ್ರೀಮತಿ ಆರತಿ ಹಾಗೂ ಬಿಳಿನೆಲೆ ಪಂಚಾಯತ್ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು .

ಮೊದಲ ದಿನದ ಎನ್ ಎಸ್ ಎಸ್ ಯೋಜನೆಯ ಶಿಬಿರವು ಕೈಕಂಬ - ಪಿಲಿಕಜೆ - ನಡ್ತೋಟು-ಹೊಸೊಕ್ಲು-ಗುಂಡಿಗದ್ದೆ ರಸ್ತೆಯ ಗುಂಡಿಗಳನ್ನು ಮುಚ್ಚಿ ಅಭಿವೃದ್ಧಿಪಡಿಸಲಾಯಿತು.

Post a Comment

Previous Post Next Post

Featured Posts

Post ADS 1

Main Slider

Post ADS 2