ಕುಕ್ಕೆ ಸುಬ್ರಹ್ಮಣ್ಯ; ನ;23,ಕಳೆದ ಮೂರು ದಿನಗಳಲ್ಲಿ ಮೂರು ಪ್ರಕರಣಗಳಲ್ಲಿ ದೇವಸ್ಥಾನದ ಸಿಬ್ಬಂದಿ ಕಳೆದು ಹೋದ ಹಣವನ್ನು ಭಕ್ತರಿಗೆ ಹಿಂದಿರುಗಿಸಿದ್ದಾರೆ.
ಈ ಬಗ್ಗೆ ಮಾನ್ಯ ಆಡಳಿತಾಧಿಕಾರಿ ಜೂಬಿನ್ ಮಹಾಪಾತ್ರ ಅವರು "ಈ ಬಗ್ಗೆ ನಮಗೆಲ್ಲರಿಗೂ ಹೆಮ್ಮೆ ಇದೆ "ಇಂತಹ ದಯೆ ಮತ್ತು ಪ್ರಾಮಾಣಿಕತೆಯ ಕಾರ್ಯಗಳು ಮುಂದಿನ ದಿನಗಳಲ್ಲಿ ಕುಕ್ಕೆ ಸುಬ್ರಹ್ಮಣ್ಯವನ್ನು ಎಲ್ಲಾ ಭಕ್ತಾದಿಗಳಿಗೆ ಮಾದರಿ ದೇವಾಲಯವಾಗಿ ಮಾಡಲಿ ಎಂದು ನಾವು ಭಾವಿಸುತ್ತೇವೆ. ".ಎಂದು ಹೇಳಿದ್ದಾರೆ.
ತಮ್ಮ ಸೇವೆಯಲ್ಲಿ ಪ್ರಾಮಾಣಿಕತೆ ಮೆರೆದ ನಮ್ಮ ಸಿಬ್ಬಂದಿಗಳಿಗೆ ಆಡಳಿತದಿಂದ ಪ್ರಶಂಸನಾ ಪತ್ರಗಳನ್ನು ನೀಡಿದ್ದೇವೆ ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಆಡಳಿತಾಧಿಕಾರಿಗಳು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಧಿಕಾರದ ಚುಕ್ಕಾಣಿ ಹಿಡಿದ ಮೇಲೆ,
ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದ ಅಭಿವೃದ್ಧಿಗೆ ನಿರಂತರ ಶ್ರಮ ಪಡುತ್ತಿದ್ದಾರೆ.
ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ಏನೇ ಒಂದು ಅಭಿವೃದ್ಧಿ ವಿಚಾರದಲ್ಲಿ ಕೆಲಸ ಕಾರ್ಯಗಳು ಆಗಬೇಕು ಎಂದು ಆಡಳಿತ ಅಧಿಕಾರಿ ಅವರ ಗಮನಕ್ಕೆ ತಂದ ಕೂಡಲೇ ಅದನ್ನು ವಿಮರ್ಶೆ ಮಾಡಿ ಕಾರ್ಯರೂಪಕ್ಕೆ ತರುತ್ತಾರೆ.
ಎಲ್ಲರ ಮೆಚ್ಚುಗೆಗೆ ಪಾತ್ರವಾದ ಅಧಿಕಾರಿ;
ಮಾನ್ಯ ಆಡಳಿತಅಧಿಕಾರಿ ಜೂಬಿನ್ ಮಹಾಪಾತ್ರ ಅವರು, ಪುತ್ತೂರು ತಾಲೂಕು ಉಪ ವಿಭಾಗಾಧಿಕಾರಿಯಾಗಿ ಅವರಿಗೆ ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳ ಸರಕಾರಿ ಸೇವೆ ಜೊತೆ ಜೊತೆಯಲಿ, ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರ ಆಡಳಿತ ಅಧಿಕಾರಿಯಾಗಿ ಅಭಿವೃದ್ಧಿಗೆ
ಶ್ರೀ ಕ್ಷೇತ್ರಕ್ಕೆ ಬರುವಂತಹ ಭಗವದ್ಭಕ್ತರಿಗೆ ಯಾವುದೇ ರೀತಿಯ ತೊಂದರೆಗಳು,ಆಗಬಾರದು,ಎಂದು ವಿವಿಧ ಯೋಜನೆಗಳನ್ನು ಮಾಡಿ ಕುಕ್ಕೆ ಸುಬ್ರಹ್ಮಣ್ಯ ದೇವರ ಸೇವೆ ಸಲ್ಲಿಸುತ್ತಿದ್ದಾರೆ.
ನಮ್ಮ ದೇವಸ್ಥಾನ ನಮ್ಮ ಜಿಲ್ಲೆಯ, ಕರ್ನಾಟಕ ರಾಜ್ಯದ ಮುಖ ಇದ್ದಹಾಗೆ, ವರ್ಷವೂ ನಡೆದುವ ಷಷ್ಠಿ ಜಾತ್ರೆ ನಮ್ಮ ರಾಜ್ಯದ ಹಬ್ಬ ಇದ್ದಹಾಗೆ ಅವರು ವರ್ಣಿಸಿದ್ದಾರೆ.
ಈ ಮಾತಿನಿಂದ ಸುಬ್ರಹ್ಮಣ್ಯ ಕ್ಷೇತ್ರ ಯಾವ ರೀತಿ ಅಭಿವೃದ್ಧಿಯಾಗಬೇಕು ಎಂಬುದು ಅವರ ಮನಸಿನಲ್ಲಿದೆ ಎಂಬುದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬಹುದು.
ಅಭಿವೃದ್ಧಿ ಬಗ್ಗೆ ಸಭೆಗಳನ್ನು ನಡೆಸಿ ಚರ್ಚಿಸಿ ದೇವಸ್ಥಾನದ ಸಿಬ್ಬಂದಿಗಳಿಗೆ ಮೃದುಕೌಶಲ್ಯ ಹಾಗೂ ಶಿಸ್ತು ಕ್ರಮಗಳನ್ನು ಜಾರಿ ಮಾಡಿದ್ದಾರೆ, ಈ ಬಗ್ಗೆ ತರಬೇತಿ ಕಾರ್ಯಕ್ರಮಗಳು ನಡೆದಿದೆ.
ಇದೇ ರೀತಿಯ ವಿವಿಧ ಬಗೆಯ ತರಬೇತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.
ಆದ್ದರಿಂದ ಇಲ್ಲಿ ನಾವು ಸ್ಮರಿಸಬೇಕಾದ ವಿಚಾರವೇನೆಂದರೆ ಸಿಬಂದಿಗಳ ಶಿಸ್ತಿನ ಹಿಂದೆ ಮಾನ್ಯ ಆಡಳಿತಅಧಿಕಾರಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಅವರ ಅವಿರತ ಶ್ರಮ ಇದೆ ಎಂಬುದು.
Post a Comment