ಗುರುಪುರ: ಮನುಷ್ಯನಿಗೆ ಬೇರೆ ಬೇರೆ ರೀತಿಯ ಸಮಸ್ಯೆಗಳು, ಕಷ್ಟಗಳು ಇರಬಹುದು ಮಾನಸಿಕ ಖಿನ್ನತೆಗೆ ಒಳಗಾಗಿರುವುದು, ಕುಡಿತದ ಚಟಕ್ಕೆ ಬಲಿಯಾಗಿರಬಹುದು, ಯಾವುದೋ ಸಮಸ್ಯೆಗೆ ಒಳಗಾದ ಒಬ್ಬ ವ್ಯಕ್ತಿ ಮಗುವನ್ನ ಕೈಯಲ್ಲಿ ಹಿಡಿದುಕೊಂಡು ಗುರುಪುರ ಸೇತುವೆಯ ತಡೆಗೋಡೆ ಮೇಲೆ ಏರಿ ಆತ್ಮಹತ್ಯೆ ಮಾಡುವ ರೀತಿಯಲ್ಲಿ ವರ್ತಿಸುತ್ತಿದ್ದ ವಿಡಿಯೋ ಸಾರ್ವಜನಿಕ ಮೊಬೈಲಲ್ಲಿ ಸೆರೆಯಾಗಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ನಾವೆಲ್ಲ ಪ್ರಜ್ಞಾವಂತರು ಶಭಾಷ್ ಹೇಳಬೇಕಾದ ವಿಚಾರ ಏನೆಂದರೆ, ಆ ಕ್ಷಣಕ್ಕೆ ಅಲ್ಲಿ ಸೇರಿದ ಆ ಯುವಕರ ತಂಡದ ಆ ಕಾರ್ಯ,
ಹೌದು ಮಗುವನ್ನ ಹಿಡಿದುಕೊಂಡಿರುವ ಆ ವ್ಯಕ್ತಿ ಯಾರು ಹತ್ತಿರಕ್ಕೆ ಬರಬೇಡಿ ಎಂದು ಹೇಳುತ್ತಿರುವುದು ಕಂಡುಬರುತ್ತದೆ.
ಮಾನವೀಯತೆ ಮೆರೆದ ಯುವಕರು ಆತನನ್ನು ಹಾಗೂ ಮಗುವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ಮನುಷ್ಯತ್ವ ಅಲ್ಲವೇ ? ನಾನು ನನ್ನ ಹಾಗೆ ಅವರು ಎಂಬ ಭಾವನೆ ಎಲ್ಲರೂ ಮೆಚ್ಚಬೇಕಾದಂತ ಒಂದೊಳ್ಳೆ ಕಾರ್ಯವನ್ನು ಮಾಡಿ ನದಿಗೆ ಹಾರಲು ಪ್ರಯತ್ನ ಪಡುತ್ತಿದ್ದ ವ್ಯಕ್ತಿಯನ್ನು ಹಾಗೂ ಮಗುವನ್ನು ರಕ್ಷಣೆ ಮಾಡಿದ್ದಾರೆ.
ಒಳ್ಳೆ ಕಾರ್ಯಗಳನ್ನು ಮಾಡಿದಾಗ ಅವರನ್ನು ಗೌರವಿಸುವುದು, ನಮ್ಮೆಲ್ಲರ ಕರ್ತವ್ಯ ಅಲ್ಲವೇ?
ನಾಗರಿಕ ಸಮಾಜ ಎಚ್ಚೆತ್ತುಕೊಳ್ಳಬೇಕು ಹಾಗೂ ಆತ್ಮಹತ್ಯೆ ಯಂತಹ ದುಡುಕು ನಿರ್ಧಾರಗಳನ್ನು ತೆಗೆದು ಕೊಳ್ಳಬಾರದು ಎಂಬುದು ನಮ್ಮ ಆಶಯ.
Post a Comment