ಪಂಜದಲ್ಲಿ ಪಂಜ -ಮಂಗಳೂರು ಸೀನಿಯರ್ ಚೇಂಬರ್ ಸ್ನೇಹ ಸಮ್ಮಿಲನ.


ಸುಬ್ರಹ್ಮಣ್ಯ ನ.25: ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಪಂಜ ಹಾಗೂ ಮಂಗಳೂರು ಲೀಜನ್ ಗಳ ಸ್ನೇಹ ಸಮ್ಮಿಲನ ರವಿವಾರ ಪಂಜ ಲಯನ್ಸ್ ಕ್ಲಬ್ ಸೇವಾ ಸದನದಲ್ಲಿ ಜರಗಿತು.ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಸೀನಿಯರ್ ಚೇಂಬರ್ ಲಿಜನ್ ಅಧ್ಯಕ್ಷ ದತ್ತಾತ್ರೇಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಡಾ. ಅರವಿಂದರಾವ್ ಕೇದಿಗೆ ಉಪಸ್ಥಿತರಿದ್ದರು ವೇದಿಕೆಯಲ್ಲಿ ಸೀನಿಯರ್ ಚೇಂಬರ್ ರಾಷ್ಟ್ರೀಯ ಉಪಾಧ್ಯಕ್ಷ ಕಿಶೋರ್ ಪೆರಾಂಡಿಸ್ ಪಂಜಾಬ್ ಸೀನಿಯರ್ ಚೇಂಬರ್ ಅಧ್ಯಕ್ಷ ಕುಕ್ಕುಪುಣೆ, ಕಾರ್ಯದರ್ಶಿ ಶಿವಪ್ರಸಾದ್ ಹಾಲೆ ಮಜಲು, ರಾಷ್ಟ್ರೀಯ ಅಧಿಕಾರಿ ಅಶೋಕ್, ಮಂಗಳೂರು ಸೀನಿಯರ್ ಚೇಂಬರ್ ನ ಕಾರ್ಯದರ್ಶಿ, ಯೋಜನಾ ನಿರ್ದೇಶಕರು ,ಪಂಜ ಸೀನಿಯರ್ ಚೇಂಬರ್ ಪೂರ್ವ ಅಧ್ಯಕ್ಷ ದಯಾ ಪ್ರಸಾದ ಚಿಮುಳ್ಳು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಸುಬ್ರಹ್ಮಣ್ಯ ಸೀನಿಯರ್ ಚೇಂಬರ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡು ತೋಟ, ಸದಸ್ಯರಾದ ಅಶೋಕ್ ಕುಮಾರ್ ಮೂಲೆ ಮಜಲು, ಪಂಜ ಲೈನ್ಸ್ ಕ್ಲಬ್ಬಿನ ಅಧ್ಯಕ್ಷ ಶಶಿಧರ ಪಳಂಗಾಯ ,ಪಂಜ ಜಿಸಿಐನ ಪೂರ್ವ ಅಧ್ಯಕ್ಷ ರುಗಳಾದ ಸವಿತಾರ ಮುಡೂರು, ಸೋಮಶೇಖರ ನೇರಳ, ಲೋಕೇಶ್ ಅಕ್ಕರಿಕಟ್ಟೆ,ಜಯರಾಮ ಕಲ್ಲಾಜೆ, ಭರತ್ ನಿಕ್ರಾಜ್, ಚೇತನ್ ತಂಟೆಪಾಡಿ ,ನಾಗಮಣಿ, ಇಟ್ಟಿ ಗುಂಡಿ, ಜೀವನ್ ಮುಂತಾದವರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ಪಂಜಾಬ್ ಸೀನಿಯರ್ ಚೇಂಬರ್ ಪೂರ್ವ ಅಧ್ಯಕ್ಷ ದಯಾಪ್ರಸಾದ್ ಚಿಮುಳ್ಳು ಅವರ ಗ್ರೀನ್ ಫಾರಂ ಗೆ ಮಂಗಳೂರು ಕ್ಲಬ್ಬಿನವರು ಭೇಟಿ ನೀಡಿ ವಿವಿಧ ಹಣ್ಣುಗಳು ಗಿಡಗಳು ಮತ್ತು ಅದರ ಪೋಷಣೆ ಬಗ್ಗೆ ಮಾಹಿತಿ ಪಡೆದರು. ಮಂಗಳೂರು ಹಾಗೂ ಪಂಜಸೀನಿಯರ್ ಚೇಂಬರ್ನ ಸದಸ್ಯರುಗಳ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಯಿತು, ಹಾಗೂ ವಿವಿಧ ರೀತಿಯ ಮನರಂಜನ ಕಾರ್ಯಕ್ರಮಗಳನ್ನು ನೀಡಲಾಯಿತು.

Post a Comment

Previous Post Next Post

Featured Posts

Post ADS 1

Main Slider

Post ADS 2