ಸಕಲೇಶಪುರ;23/10/2024 ರಂದು12ಗಂಟೆ 33ನಿಮಿಷಕ್ಕೆ,ಮರ್ನಳ್ಳಿ,ಪೊಲೀಸ್ ಚಕ್ ಪಾಯಿಂಟ್ ಅಲ್ಲಿ ,
ಗೌರವಾನ್ವಿತ ಸಕಲೇಶಪುರ ಸಬ್ ಇನ್ಸ್ಪೆಕ್ಟರ್
ಸದಾಶಿವ ತಿಪ್ಪಾರೆಡ್ಡಿ ಅವರು,
ವಾಹನಗಳನ್ನ ತಡೆದು ದಾಖಲೆಗಳು ಇಲ್ಲದ ವಾಹನಗಳಿಗೆ, ಕಾನೂನು ಪಾಲಿಸದೆ ಸಮವಸ್ತ್ರ ಧರಿಸದೆ ಇದ್ದ ಚಾಲಕರ ಮೇಲೆ, ಸೀಟು ಬೆಲ್ಟ್ ಧರಿಸದೆ ವಾಹನ ಚಲಾವಣೆ ಮಾಡುವರ ಮೇಲೆ, ದಂಡ ವಿಧಿಸುವ ಕರ್ತವ್ಯದಲ್ಲಿ ನಿರತರಾಗಿದ್ದರು.
https://youtu.be/iYBiqWFb3Ww?si=oOUDrT9nyG8QUuZ3
ಬೆಂಗಳೂರು ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ಮಂಗಳೂರಿನ ಅಬ್ದುಲ್ ಬಾರಿ ಎಂಬ ಹೆಸರಿನ ಚಾಲಕ, ಸಮವಸ್ತ್ರ ಧರಿಸಿಕೊಂಡು ಬರುತ್ತಾನೆ, ಸೀಟು ಬೆಲ್ಟ್ ಹಾಕಿಲ್ಲ ಐದು ನೂರು ರೂಪಾಯಿ ದಂಡ ಕಟ್ಟು ಎಂದಾಗ, ಚಾಲಕ ಹೇಳುತ್ತಾನೆ ನನ್ನ ಕೈಯಲ್ಲಿ ದುಡ್ಡು ಕಟ್ಟಲು ದುಡ್ಡು ಇಲ್ಲ, ನಾನು ಒಂದು ಕಂಪನಿ ವಾಹನದ ಚಾಲಕ, ನೀವು ದಂಡ ಹಾಕಿ ರಶೀದಿ ನೀಡಿ ದನಿಗಳು ಕಟ್ಟುತ್ತಾರೆ.
ಇವಾಗ ಕೊಡಲು ದುಡ್ಡು ಇಲ್ಲ ಎಂದಾಗ ಏಕಾಏಕಿ ಸಬ್ ಇನ್ಸ್ಪೆಕ್ಟರ್ ಸದಾಶಿವ ಅವರು ನೀನು ಯಾವ ಊರಿನವ ಮಂಗಳೂರಿನ ಹಾಗೆ ಇಲ್ಲಿ ಮಾತನಾಡಲಾಗುವುದಿಲ್ಲ, ಎಂದು ಗದರಿಸಿ ಸಮವಸ್ತ್ರ ಧರಿಸದೆ ಇದ್ದ ಪೊಲೀಸ್ ಪೇದೆ ಒಬ್ಬ ಈ ಚಾಲಕನಿಗೆ ಅವಾಚ್ಯ ಶಬ್ದಗಳಿಂದ ಬೈದು, ಅಲ್ಲಿ ಠಾಣೆಯ ರೂಮಿನೊಳಗೆ ಕಾಲರ್ ಪಟ್ಟಿ ಹಿಡಿದು ಎಳೆದುಕೊಂಡು ಹೋಗಿ ಹೊಡೆದಿರುತ್ತಾರೆ, ಕಣ್ಣೀರು ಹಾಕಿಕೊಂಡು ಹೊರಬಂದ ಚಾಲಕ ಪುನಃ ಅದೇ ಮಾತನ್ನು ಹೇಳುತ್ತಾನೆ, ನಾನು ದುಡ್ಡು ಕೊಟ್ಟರೆ ಕಂಪನಿಯಿಂದ ನನಗೆ ದೊರೆಯುವುದಿಲ್ಲ, ನನಗೆ ನಷ್ಟ ಆಗುತ್ತದೆ, ನಮ್ಮ ಸಂಸ್ಥೆಯ ನಿಯಮ ಯಾರೇ ಅಧಿಕಾರಿಗಳು ದಂಡ ವಿಧಿಸಿದರೆ ಅದರ ರಸೀದಿಯನ್ನು ನೀಡಿದರೆ ಸಂಸ್ಥೆ ಕಟ್ಟುತ್ತಾರೆ.
ನಮ್ಮ ಪ್ರಶ್ನೆ ಒಬ್ಬ ಚಾಲಕ ಕಾಕಿ ಧರಿಸಿರುತ್ತಾನೆ ಅವನು ತನ್ನ ಹೊಟ್ಟೆಪಾಡಿಗೆ ಕಷ್ಟಪಟ್ಟು ರಾತ್ರಿ ಹಗಲು ದುಡಿಯುತ್ತಾನೆ. ಯಾವುದೇ ಕಳ್ಳತನ ವಂಚನೆ ದರೋಡೆ ಸುಲಿಗೆ ಇತರ ಕೃತ್ಯಗಳನ್ನು ಮಾಡುವುದಲ್ಲ, ತುಂಬಾ ಶ್ರಮಪಟ್ಟು ವಾಹನ ಚಾಲನೆ ಮಾಡುತ್ತಾರೆ,
ಇಂತಹ ಒಬ್ಬ ಬಡಪಾಯಿ ಚಾಲಕನ ಮೇಲೆ ಅದೇ ಕಾಕಿ ಧರಿಸಿದ ಸರಕಾರಿ ಪೊಲೀಸ್ ಅಧಿಕಾರಿ ಹಲ್ಲೆ ಮಾಡುವುದು ಕೆಟ್ಟ ಶಬ್ದಗಳಿಂದ ತೇಜೋವಧೆ ಮಾಡುವುದು ಸರಿಯಾ?
ಮಂಗಳೂರು ಚಾಲಕರ ನಿಂದನೆ ಮಾಡಿದ ಗೌರವಾನ್ವಿತ ಸಕಲೇಶಪುರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಸದಾಶಿವ ಅವರು.
https://youtu.be/iYBiqWFb3Ww?si=oOUDrT9nyG8QUuZ3
ಚಾಲಕ ಅಬ್ದುಲ್ ಬಾರಿ ಜೊತೆ ಮಾತನಾಡುವಾಗ ನಿಂದು ಯಾವೂರು ಕೇಳುತ್ತಾರೆ,
ನಾನು ಮಂಗಳೂರಿನವ ಎಂದಾಗ ಏಕವಚನದಲ್ಲಿ ತೀರ ಕೀಳು ಮಟ್ಟದ ಪದಗಳನ್ನು ಬಳಕೆ ಮಾಡಿ ನಾನು ಹುಬ್ಬಳ್ಳಿ ಅವ ನನ್ ಮಗನೇ ನಿನ್ನ ತರ ಬರ ತುಳ್ಳು ತುಣ್ಣೇ ಎಲ್ಲಾ ಬರೋತ್ತೆ, ನಿನ್ನ ಉಲ್ಟ ನೇತು ಹಾಕಲು ಬರುತ್ತೆ, ಅರ್ಥ ಆಯ್ತಾ? ನಿನ್ನ ಅಪ್ಪ ನಂಗೆ ಮಾತನಾಡೊ ಗೊತ್ತಿದೆ,
ಲೋಫರ್ ಬಡ್ಡಿ ಮಗ ಮಂಗಳೂರಿನಲ್ಲಿ ಮಾತನಾಡಿದ ಹಾಗೆ ಮಾತನಾಡುತ್ತಾನೆ, ನಾವು ಮಂಗಳೂರಿನವರು ಅಂತ ಕೆಟ್ಟ ವ್ಯಕ್ತಿಗಳ?
ಈ ರೀತಿ ಕೆಟ್ಟ ಪದಗಳಿಂದ ಒಂದು ಚಾಲಕನನ್ನ, ಗೌರವಾನ್ವಿತ ಸ್ಥಾನದಲ್ಲಿರುವ ಸಬ್ ಇನ್ಸ್ಪೆಕ್ಟರ್ ಮಾತನಾಡುತ್ತಾರೆ ಎಂದಾದರೆ ನಮ್ಮ ಪೊಲೀಸ್ ಇಲಾಖೆಯ ಮಾನ ಮರ್ಯಾದೆ ಹೋಗುವುದಿಲ್ಲವೇ?
ಪೋಲಿಸ್ ಇಲಾಖೆಯಲ್ಲಿ ಇದೇ ರೀತಿ ಮಾತನಾಡಬೇಕು ಎಂಬ ನಿಯಮಇದ್ಯಾ?
ಮಂಗಳೂರಿನವರನ್ನು ಈ ರೀತಿ ಕೆಟ್ಟ ಪದಗಳಿಂದ ನಿಂದಿಸಿರುವುದು ಖಂಡನೀಯ, ಈ ಬಗ್ಗೆ ಮೇಲಾಧಿಕಾರಿಗಳು ಸಂಬಂಧ ಪಟ್ಟ ಅಧಿಕಾರಿಗಳು, ಪೊಲೀಸ್ ಅಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.
إرسال تعليق