ಸುಬ್ರಹ್ಮಣ್ಯದ ಕುಮಾರಧಾರ ವೆಂಟೆಡ್ ಡ್ಯಾಮ್ ಬಳಿ ಸ್ವಚ್ಛತಾ ಕಾರ್ಯ.

ಸುಬ್ರಹ್ಮಣ್ಯ ಅ.27: ಪಶ್ಚಿಮ ಘಟ್ಟದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಅಪಾರ ಪ್ರಮಾಣದ ನೀರು ಕುಮಾರಧಾರ ನದಿಯಲ್ಲಿ ಹರಿದು ಬಂದು ಭಕ್ತಾದಿಗಳ ಸ್ನಾನಘಟ್ಟ ಬಳಿಯ ವೆಂಟೆಡ್ ಡ್ಯಾಮ್ ಬಳಿ ಮರ, ಕಸ, ಕಡ್ಡಿ, ಕಲ್ಲು ,ಸೇರಿಕೊಂಡು ನೀರು ಶೇಖರಣೆಗೊಂಡು ಮಲಿನ ಗೊಂಡಿತ್ತು. 
ಇದನ್ನು ಮನಗಂಡ ರವಿ ಕಕ್ಕೆ ಪದವು ಪದವು ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಮಣ್ಯ ಲೀಜನ ನ ಸುಮಾರು 40 ಸ್ವಯಂಸೇವಕರು ಟ್ರಸ್ಟ್ ನ ಸಂಸ್ಥಾಪಕ ಡಾl ರವಿಕಕ್ಕೆ ಪದವು ಅವರ ನೇತೃತ್ವದಲ್ಲಿ ರವಿವಾರ ವೆಂಟೆಡ್ ಡ್ಯಾಮ್ ನಲ್ಲಿ ಸಿಕ್ಕಿಹಾಕಿಕೊಂಡಿದ್ದ ಎಲ್ಲಾ ತರದ ಬೃಹದಾಕಾರದ ದಿಮ್ಮಿಗಳು, ಪ್ಲಾಸ್ಟಿಕ್, ಬಟ್ಟೆ, ಇತ್ಯಾದಿಗಳನ್ನ ತೆಗೆದು ಸ್ವಚ್ಛಗೊಳಿಸಲಾಯಿತು.
 ಇದರಿಂದಾಗಿ ನದಿಯಲ್ಲಿ ನೀರು ಸರಾಗವಾಗಿ ಹರಿದು ಭಕ್ತಾದಿಗಳು ತೀರ್ಥ ಸ್ನಾನ ಮಾಡುವ ಸ್ನಾನ ಗಟ್ಟದಲ್ಲಿ ಯಾವುದೇ ಮಲಿನ ನೀರು ಇಲ್ಲದಂತಾಗಿದೆ.
ಈ ಬಗ್ಗೆ ಡಾlರವಿಕಕ್ಕೆ ಪದವು ಅವರನ್ನ ವಿಚಾರಿಸಿದಾಗ ನಾವು ಪ್ರತಿ ರವಿವಾರ ಸ್ವಚ್ಛತಾ ಕಾರ್ಯವನ್ನು ಮಾಡುತ್ತಾ ಬಂದಿದ್ದೇವೆ. ಇದರಿಂದಾಗಿ ಶ್ರೀ ಕ್ಷೇತ್ರಕ್ಕೆ ಬರುವ ಸಾವಿರಾರು ಭಕ್ತಾದಿಗಳಿಗೆ ತೀರ್ಥ ಸ್ನಾನ ಮಾಡಲು ಯಾವುದೇ ಅಡೆತಡೆ ಇಲ್ಲದಾಗಿದೆ ,ಹಾಗೂ ವಾಹನ ಪಾರ್ಕಿಂಗ್ ಸ್ಥಳ ರಸ್ತೆಯ ಇಕ್ಕಲಗಳಲ್ಲಿ ಇರುವಂತ ಕಸ ಕಡ್ಡಿಗಳು ,ತ್ಯಾಜ್ಯ ವಸ್ತುಗಳನ್ನ ಸ್ವಚ್ಛಗೊಳಿಸಿ, ವಾಹನಗಳ ಪಾರ್ಕಿಂಗ್ ಹಾಗೂ ನಡೆದಾಡಲು ಅನುವು ಮಾಡಿಕೊಡಲಾಗಿದೆ.
 ಈ ರೀತಿಯಾಗಿ ಎಲ್ಲಾ ಕಡೆಗಳಲ್ಲಿ ಜನರು ತಮ್ಮ ತಮ್ಮ ಪ್ರದೇಶ ಪರಿಸರಗಳಲ್ಲಿ ಸ್ವಚ್ಛತಾ ಕಾರ್ಯವನ್ನ ಕೈಗೊಂಡಲ್ಲಿ ಸ್ವಸ್ಥ ಆರೋಗ್ಯದೊಂದಿಗೆ ಉತ್ತಮ ಜೀವನವನ್ನು ನಡೆಸಬಹುದಾಗಿದೆ ಎಂದವರು ತಿಳಿಸಿದರು.

Post a Comment

أحدث أقدم

Featured Posts

Post ADS 1

Main Slider

Post ADS 2