ಕಡಬ ; ನ,04,ರಾಜ್ಯ ಸರಕಾರವು ರೈತರ ಜಮೀನುಗಳ ಪಹಣಿಗಳಲ್ಲಿ ಅಕ್ರಮವಾಗಿ ವಕ್ ಜಮೀನು ಎಂದು -ಸಮೂದಿಸಿ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿರುವುದರ ಕುರಿತು ಮಧ್ಯಪ್ರವೇಶಿಸುವಂತೆ ಮನವಿ.
ರಾಜ್ಯದ ಕಾಂಗ್ರೆಸ್ ಸರಕಾರವು ಎಲ್ಲಾ ರೀತಿಯಿಂದಲೂ ಜನವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಇದೀಗ ರಾಜ್ಯದ ಅನೇಕ ಜಿಲ್ಲೆಗಳ ರೈತರ ಪಹಣಿಗಳಲ್ಲಿ ಏಕಾಏಕಿಯಾಗಿ "ವಕ್ಸ್ ಆಸ್ತಿ, ಪರಭಾರೆ ನಿಷೇಧಿಸಿದೆ" ಎಂದು ನಮೂದಿಸುವ ಮೂಲಕ ಸಾವಿರಾರು ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿದೆ. ವಕ್ಸ್ ಸಚಿವ ಜಮೀರ್ ಅಹ್ಮದ್‌ರವರು ಹೇಳಿದಂತೆ ಮಾನ್ಯ ಮುಖ್ಯಮಂತ್ರಿಗಳ ಸೂಚನೆಯಂತೆ, ಜಿಲ್ಲಾವಾರು ವಕ್ಸ್ ಅದಾಲತ್ ಹೆಸರಿನಲ್ಲಿ ಸಭೆಗಳನ್ನು ನಡೆಸಿ ರೈತರ ಜಮೀನಿನ ಪಹಣಿಗಳಲ್ಲಿ ಮೇಲೆ ತಿಳಿಸಿದಂತೆ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಒತ್ತಡ ಹೇರುತ್ತಿರುವುದು ಪ್ರಜಾತಂತ್ರ ವಿರೋಧಿಯಾಗಿದೆ. ರಾಜ್ಯದ ರೈತರ ಹಾಗೂ ಜನಸಾಮಾನ್ಯರ ಬದುಕನ್ನು ಆತಂತ್ರ ಮಾಡುವ ಈ ಕೃತ್ಯದ ಹಿಂದೆ ಇಸ್ಲಾಮೀಕರಣದ ಷಡ್ಯಂತ್ರ ಅಡಗಿರುವಂತೆ ಕಾಣುತ್ತಿದೆ. ರಾಜ್ಯದ ಕಾಂಗ್ರೆಸ್ ಸರಕಾರದ ಅತಿಯಾದ ಅಲ್ಪಸಂಖ್ಯಾತರ ಓಲೈಕೆ ನೀತಿಯು ರಾಜ್ಯದಲ್ಲಿ ಅರಾಜಕತೆಗೆ ಕಾರಣವಾಗಲಿದೆ.
ಆದುದರಿಂದ ರಾಜ್ಯದ ಆಡಳಿತದ ಮುಖ್ಯಸ್ಥರಾದ ತಾವು ಈ ವಿಷಯದಲ್ಲಿ ಕೂಡಲೇ ಮದ್ಯಪ್ರವೇಶಿಸಿ, ಸದ್ರಿ ನೀತಿಯನ್ನು ಕೈಬಿಡುವಂತೆ ಹಾಗೂ ಸಂವಿಧಾನ ವಿರೋಧಿ ಹೇಳಿಕೆಗಳನ್ನು ನೀಡುತ್ತಿರುವ ಸಚಿವ ಜಮೀರ್ ಅಹ್ಮದ್‌ರವರನ್ನು ಸಂಪುಟದಿಂದ ಕೈಬಿಡುವಂತೆ ಮುಖ್ಯಮಂತ್ರಿಗಳಿಗೆ ನಿರ್ದೇಶನ ನೀಡುವಂತೆ ಕಡಬದಲ್ಲಿ ಇಂದು ಭಾರತೀಯ ಜನತಾ ಪಾರ್ಟಿ ಬೃಹತ್ ಪ್ರತಿಭಟನೆ ನಡೆಸಿ ಮಾನ್ಯ ತಹಶೀಲ್ದಾರ ಮೂಲಕ ಮಾನ್ಯ ಕರ್ನಾಟಕ ರಾಜ್ಯಪಾಲರಿಗೆ ಮನವಿ ಪತ್ರ ನೀಡುವುದರ ಮೂಲಕ ವಿನಂತಿಸಿಕೊಂಡಿದ್ದಾರೆ.
إرسال تعليق