ಕುಕ್ಕೆ ಸುಬ್ರಹ್ಮಣ್ಯ; ನ,18,ಕುಕ್ಕೆ ಸುಬ್ರಹ್ಮಣ್ಯ 38 ವರ್ಷ ಪ್ರಾಯದ ಮಹೇಶ್ ಪಾಟೀಲ್ ಎಂಬವರು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಬೋಜನ ಶಾಲೆಯಲ್ಲಿ ಉದ್ಯೋಗ ಮಾಡುತ್ತಿದ್ದು, ಇಂಜಾಡಿ ಎಂಬಲ್ಲಿ ವಸತಿ ಗೃಹದಲ್ಲಿ ವಾಸವಾಗಿದ್ದಾರೆ,ಯಾವಾಗಲೂ ಮನೆಗೆ ಬರುವ ಸಮಯಕ್ಕೆ ಬಾರದೆ ಇದ್ದಾಗ ಅವರು ಕಾಣೆಯಾಗಿದ್ದಾರೆ ಎಂದು ತಿಳಿದುಬಂದಿದ್ದು. ಈ ಬಗ್ಗೆ ನಿನ್ನೆ ವರದಿ ಮಾಡಲಾಗಿತ್ತು.
ಮಹೇಶ್ ಪಾಟೀಲ್ ಅವರ ಅಣ್ಣ ಈರಣ್ಣ ಹಾಗೂ ಮಲ್ಲಣ್ಣ ಹಾಗೂ ಸಂಬಂಧಿಕರು ಹುಡುಕಲು ಪ್ರಾರಂಭಿಸಿದ್ದಾರೆ, ಸಾಮಾಜಿಕ ಜಾಲತಾಣದಲ್ಲಿ ಸಂದೇಶಗಳನ್ನು ಕಳಿಸಿ ಪ್ರಯತ್ನಿಸಿದ್ದಾರೆ. ನಿನ್ನೆ ಪತ್ತೆಯಾಗಿರಲಿಲ್ಲ ಇಂದು ಬೆಳಿಗ್ಗೆಯಿಂದಲೇ ಹುಡುಕಿದಾಗ ಸುಮಾರು 9 ಗಂಟೆ ಸಮಯಕ್ಕೆ ಕುಲ್ಕುಂದ ಪಂಜಿಪಾದೆ ಎಂಬಲ್ಲಿ ನಡು ನೀರಿನ ಮಧ್ಯೆ ಬಂಡೆ ಮೇಲೆ ಕುಳಿತಿರುವುದನ್ನು ಊರಿನವರು ಗಮನಿಸಿದ್ದಾರೆ.
ಅವರನ್ನು ರಕ್ಷಿಸಿ,ಮನವೊಲಿಸಿದ ಸಾ .ಶ್ರೀ .ಗ .ಸಮಿತಿ ಹಾಗೂ ಕುಲ್ಕುಂದ ಊರಿನವರು ಅವರ ಕುಟುಂಬದವರ ಜೊತೆ ಸೇರಿಸಿದ್ದಾರೆ.
ಎಂದು ಮಾಧ್ಯಮಕ್ಕೆ ಅವರ ಕುಟುಂಬದವರು ತಿಳಿಸಿದ್ದಾರೆ.
ಅವರನ್ನು ಆಸ್ಪತ್ರೆಗೆ ಚಿಕಿತ್ಸೆಗೆ ಸೇರಿಸಲಾಗಿದೆ ಅವರು ನದಿ ನೀರಿನ ಮಧ್ಯೆ ಯಾಕೆ ಹೋದರು, ಏನೂ ಸಮಸ್ಯೆಗೆ ಒಳಗಾಗಿದ್ದರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ.
إرسال تعليق