ಗ್ಯಾಸ್‌ ಸಿಲಿಂಡರ್‌,ಮನೆ ಸಾಮಗ್ರಿ ಹಾಗೂ ಇನ್ನಿತರ ಬೆಲೆಬಾಳುವ ವಸ್ತುಗಳನ್ನು ಕದಿಯುತ್ತಿದ್ದ ಚೋರರಿಬ್ಬರನ್ನು ಬಂಧಿಸಿದ ಪೊಲೀಸರು.

                     ವಿಟ್ಲ ಪೊಲೀಸ್ ಠಾಣೆ 

ವಿಟ್ಲ ಪೊಲೀಸ್‌ ಠಾಣಾ ಸರಹದ್ದಿನ ಕಳವು ಪ್ರಕರಣಗಳ ಪತ್ತೆಯಲ್ಲಿ ತೊಡಗಿದ್ದ ವಿಟ್ಲ ಠಾಣಾ ಅಪರಾದ ತಂಡದ ಸಿಬ್ಬಂದಿಗಳು ಅ,29, ರಂದು ಬಂಟ್ವಾಳ ತಾಲೂಕು ಮಾಣಿ ಗ್ರಾಮದ ಮಾಣಿ ಜಂಕ್ಷನ್‌ ನಲ್ಲಿ ಇಬ್ಬರು ಕಳ್ಳರನ್ನು ಬಂಧಿಸಿದ್ದು, ವಿಚಾರಿಸಲಾಗಿ ವಿಟ್ಲ ಠಾಣೆಯ ಮಿತ್ತೂರು, ಕೊಡಾಜೆ ಮನೆ ಕಳವು ಎರಡು ಪ್ರಕರಣಗಳಲ್ಲಿ ಹಾಗೂ ಪುತ್ತೂರು ನಗರ ಠಾಣಾ ವ್ಯಾಪ್ತಿಯ ಶಾಲೆ ಹಾಗೂ ಅಂಗನವಾಡಿ ಕಳವು ಎರಡು ಪ್ರಕರಣಗಳಲ್ಲಿ ಬಾಗಿಯಾಗಿದ್ದ ಆರೋಪಿತರ 
ಮಹಮ್ಮದ್‌ ರಿಯಾಜ್‌ ಹಸನಬ್ಬ @ರಿಯಾಜ್‌ ಪ್ರಾಯ:38 ವರ್ಷ. ವಾಸ: ಧರ್ಮನಗರ ಮನೆ, ಬೋಳಿಯಾರು ಗ್ರಾಮ, ಉಳ್ಳಾಲ ತಾಲೂಕು 
2] ಮೊಹಮ್ಮದ್‌ ಇಂತಿಯಾಜ್ ಪ್ರಾಯ: 38 ವರ್ಷ, ವಾಸ: ಹಳೆ ಕೋಟೆ ಮನೆ,ಉಳ್ಳಾಲ, ತಾಲೂಕು
ಇಬ್ಬರನ್ನೂ ಬಂಧಿಸಿದ್ದಾರೆ.
ಇವರುಗಳು ಪೈಕಿ ಆರೋಪಿ ಮಹಮ್ಮದ್‌ ರಿಯಾಜ್‌ ಹಸನಬ್ಬ ಎಂಬಾತನ ವಿರುದ್ದ ಕೇರಳ ರಾಜ್ಯದ ಕುಂಬಳೆ ಹಾಗೂ ಮಂಗಳೂರು ನಗರ ಕೊಣಾಜೆ ಪೊಲೀಸ್‌ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿರುತ್ತವೆ.
ಆರೋಪಿಗಳನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿ ವಿಟ್ಲ ಪೊಲೀಸರು ಈ ಕೆಳಗಿನ 04 ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ರೂ 1,35,000/--ರೂ ಮೌಲ್ಯದ ಗ್ಯಾಸ್‌ ಸಿಲಿಂಡರ್‌ ಹಾಗೂ ಮನೆ ಸಾಮಗ್ರಿಗಳು , ಒಣಮೆಣಸಿನಕಾಯಿ ಗ್ಯಾಸ್‌ ಸಿಲಿಂಡರ್‌ ಹಾಗೂ ಮನೆ ಸಾಮಗ್ರಿಗಳು ,ಹಾಗೂ ಕಳ್ಳತನಕ್ಕೆ ಉಪಯೋಗಿಸಿದ KA-19-AD-0585 ನೊಂದಣಿ ನಂಬ್ರದ ಅಟೊ ರಿಕ್ಷಾ -01 ಇದರ ಅಂದಾಜು ಮೌಲ್ಯ 1,50,000/- ರೂ ಆಗಿದ್ದು ಇವುಗಳನ್ನು ವಶಪಡಿಸಿಕೊಳ್ಳಲಾಗಿದೆ ಸ್ವಾದೀನಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ- 2,85,000/- ರೂ ಆಗಬಹುದು ಏನು ಅಂದಾಜಿಸಲಾಗಿದೆ.
ಆರೋಪಿ ಪತ್ತೆಯ ಕಾರ್ಯಾಚರಣೆಯನ್ನು ದ.ಕ ಜಿಲ್ಲಾ ಪೊಲೀಸ್‌ ಅಧೀಕ್ಷಕರಾದ ಮಾನ್ಯ ಶ್ರೀ ಯತೀಶ್‌ ಎನ್‌, ಐ.ಪಿ.ಎಸ್‌ ಮತ್ತು ಹೆಚ್ಚುವರಿ ಪೊಲೀಸ್‌ ಅಧೀಕ್ಷಕರಾದ ಶ್ರೀ ರಾಜೇಂದ್ರ ಡಿ ಎಸ್‌ ರವರ ಮಾರ್ಗದರ್ಶನದಂತೆ, ಬಂಟ್ವಾಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಶ್ರೀ ಎಸ್.‌ ವಿಜಯ ಪ್ರಸಾದ್‌ ರವರ ನಿರ್ದೇಶನದಲ್ಲಿ, ವಿಟ್ಲ ಪೊಲೀಸ್ ಠಾಣಾ ಪೊಲೀಸ್‌ ನಿರೀಕ್ಷಕರಾದ ಶ್ರೀ ನಾಗರಾಜ್‌ ಹೆಚ್‌ ಈ ರವರ ನೇತ್ರತ್ವದ ಪೊಲೀಸ್‌ ಉಪ ನಿರೀಕ್ಷಕರಾದ ವಿದ್ಯಾ ಕೆ.ಜೆ. ರತ್ನಕುಮಾರ್‌, ಕೌಶಿಕ್‌ ಸಿಬ್ಬಂಧಿಗಳಾದ ಉದಯ ರೈ, ರಾಧಾಕೃಷ್ಣ ,ರಕ್ಷೀತ್‌ ರೈ,ಶ್ರೀಧರ ಸಿ ಎಸ್‌, ಕೃಷ್ಣ ನಾಯ್ಕ್‌, ಗದಿಗೆಪ್ಪ ಕಲ್ಲೂರ, ಶಂಕರ ಶಂಶಿ, ಮನೋಜ್‌,ಸತೀಶ್‌ ,ಗಣಕಯಂತ್ರ ವಿಭಾಗದ ಸಂಪತ್‌, ದಿವಾಕರ್‌,ರವರುಗಳ ತಂಡ ಭಾಗವಹಿಸಿರುತ್ತಾರೆ.

Post a Comment

أحدث أقدم

Featured Posts

Post ADS 1

Main Slider

Post ADS 2