ಕುಕ್ಕೆ ಸುಬ್ರಹ್ಮಣ್ಯ; ನ,27, ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ಚಂಪಾ ಷಷ್ಠಿ ಜಾತ್ರೆಯ ಸಂಭ್ರಮ.
ಪ್ರತಿ ವರ್ಷದಂತೆ ಎಲ್ಲಾ ರೀತಿಯ ಸಿದ್ಧತೆಗಳು ನಡೆಯುತ್ತಿದ್ದು.
ಭದ್ರತೆಯ ದೃಷ್ಟಿಯಲ್ಲಿ ಪರಿಶೀಲನೆನಡೆಸಲು ಮಾನ್ಯ ದಕ್ಷಿಣ ಕನ್ನಡ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ
ಯತೀಶ್ ಎನ್. ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ಆಗಮಿಸಿ ಅಧಿಕಾರಿಗಳ ಜೊತೆ ಚರ್ಚಿಸಿದ್ದಾರೆ.
ಜಾತ್ರೆ ನಿಟ್ಟಿನಲ್ಲಿ ನಾವು ಪೊಲೀಸ ಇಲಾಖೆಯಿಂದ ಎಲ್ಲಾ ರೀತಿಯ ಬಂದೋಬಸ್ತ್ ಮಾಡಿದ್ದೇವೆ,
ಕುಕ್ಕೆಗೆ ಆಗಮಿಸುವ ಯತ್ರಾರ್ತಿಗಳಿಗೆ ಯಾವುದೇ ರೀತಿ ಸಮಸ್ಯೆ ಆಗದ ರೀತಿಯಲ್ಲಿ ಅನುಕೂಲ ಆಗುವ ರೀತಿಯಲ್ಲಿ ಬಂದೋಬಸ್ತ್ ಮಾಡಿಕೊಂಡಿದ್ದೇವೆ,
ನಿರ್ದಿಷ್ಟವಾದ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಿಕ್ಕೆ ಹಾಗೂ ದೇವರ ದರ್ಶನ ಮಾಡಲು ಭಕ್ತರಿಗೆ ಯಾವುದೇ ರೀತಿ ಅನಾನುಕೂಲ ಆಗದ ರೀತಿ ನಾವು ಪ್ಲಾನ್ ಮಾಡಿಕೊಂಡಿದ್ದೇವೆ. ದೇವಸ್ಥಾನದ ಆಡಳಿತ ಮಂಡಳಿಯು ನಮಗೆ ಸಹಕಾರ ಕೊಡುತ್ತಿದ್ದಾರೆ.
ಷಷ್ಠಿ ಜಾತ್ರೆ ಸಂದರ್ಭದಲ್ಲಿ ಪಾರ್ಕಿಂಗ್ ನಿರ್ದಿಷ್ಟ ಸ್ಥಳದಲ್ಲಿ ಮಾಡಬೇಕು, ಸಾರ್ವಜನಿಕರ ಹಿತದೃಷ್ಟಿ ಇಂದ ಸಾಕಷ್ಟು ನಿಯಮಗಳನ್ನು ಜಾರಿ ಮಾಡುವುದರಿಂದ, ಇಲ್ಲಿನ ಸ್ಥಳೀಯ ಸಾರ್ವಜನಿಕರು ಪೊಲೀಸರ ಜೊತೆ ಕೈಜೋಡಿಸಿ ಎರಡು ಮೂರು ದಿನಗಳಲ್ಲಿ ಸಹಕಾರ ಕೊಟ್ಟರೆ ಕ್ಷೇತ್ರಕ್ಕೆ ಒಳ್ಳೆ ಹೆಸರು ಬರುತ್ತದೆ, ಬರುವಂತ ಭಕ್ತಾದಿಗಳಿಗೂ ಯಾವುದೇ ತೊಂದರೆ ತಾಪತ್ರೆಗಳಿಲ್ಲದೆ, ದೇವರ ದರ್ಶನ ಮಾಡಿಕೊಂಡು ಹೋಗಲು ಅನುಕೂಲವಾಗುತ್ತದೆ. ಆದ್ದರಿಂದ ಎಲ್ಲರ ಸಹಕಾರವನ್ನು ಈ ಸಂದರ್ಭದಲ್ಲಿ ಕೋರುತ್ತೇವೆ.
ಕುಕ್ಕೆ ಸುಬ್ರಮಣ್ಯದ ನೂತನ ಪೊಲೀಸ್ ಠಾಣೆ ನವಂಬರ್ 30 ರಂದು ಲೋಕಾರ್ಪಣೆಗೊಳ್ಳಲಿದೆ ಎಂಬ ಮಾಹಿತಿಯನ್ನು ಈ ಸಂದರ್ಭದಲ್ಲಿ ಮಾಧ್ಯಮದ ಮೂಲಕ ಸಾರ್ವಜನಿಕರಿಗೆ ತಿಳಿಸಿದ್ದಾರೆ.
ಎಡಿಶ್ನಲ್ ಎಸ್ .ಪಿ,ರಾಜೇಂದ್ರ, ಡಿ.ಎೈ.ಎಸ್.ಪಿ.ಅರುಣ್ ನಾಗೆ ಗೌಡ,
ಸರ್ಕಲ್ ಇನ್ಸ್ಪೆಕ್ಟರ್ ತಿಮ್ಮಪ್ಪ ನಾಯ್ಕ್,
ಸಬ್ ಇನ್ಸ್ಪೆಕ್ಟರ್ ಕಾರ್ತಿಕ್, ಉಪಸ್ಥಿತರಿದ್ದರು.
إرسال تعليق