ಕುಕ್ಕೆ ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಧರ್ಮಸಮ್ಮೇಳನ ಮಂಟಪದಲ್ಲಿ ಜಾತ್ರೋತ್ಸವದ ಅಂಗವಾಗಿ ಏಕಹಃ ಭಜನೆ ಅಖಂಡ ಭಜನೋತ್ಸವ ಬುಧವಾರ ಆರಂಭಗೊಂಡಿತು. ಶ್ರೀ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ದೀಪ ಬೆಳಗುವ ಮೂಲಕ ಭಜನೋತ್ಸವಕ್ಕೆ ಚಾಲನೆ ನೀಡಿದರು.
ಬುಧವಾರ ಸೂರ್ಯೋದಯದ ಸಮಯದಲ್ಲಿ ಆರಂಭಗೊಂಡ ಭಜನೆಯು ಗುರುವಾರ ಸೂರ್ಯೋದಯದ ಸಮಯ ಮಂಗಳವಾಗಲಿದೆ ಪ್ರಾರಂಭದಲ್ಲಿ ಶ್ರೀ ದೇವಳದ ನೌಕರರ ವೃಂದ ಭಜನಾ ಸೇವೆ ನೆರವೇರಿಸಿತು.24 ಗಂಟೆಗಳ 24 ತಂಡಗಳು ಭಜನಾ ಸೇವೆ ನೆರವೇರಿಸಲಿದೆ.
ಈ ಸಂದರ್ಭ ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಶ್ರೀ ದೇವಳದ ಕಚೇರಿ ಅಧೀಕ್ಷಕ ಪದ್ಮನಾಭ ಶೆಟ್ಟಿಗಾರ್, ಎಕೌಂಟೆAಟ್ ರಾಜಲಕ್ಷಿö್ಮ ಶೆಟ್ಟಿಗಾರ್, ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯರಾದ ಕೃಷ್ಣಮೂರ್ತಿ ಭಟ್, ಮಾಧವ.ಡಿ, ಮಾಜಿ ಮಾಸ್ಟರ್‌ಪ್ಲಾನ್ ಸಮಿತಿ ಸದಸ್ಯ ಶಿವರಾಮ ರೈ, ಮಾಜಿ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಗ್ರಾ.ಪಂ.ಸದಸ್ಯೆ ಸೌಮ್ಯಾ ಭರತ್, ನಿವೃತ್ತ ಮುಖ್ಯಗುರು ಕೆ.ಯಶವಂತ ರೈ, ವದ್ಯಾಸಾಗರ ಭಜನಾ ಸಂಗಮದ ಸಂಸ್ಥಾಪಕ ಗಣೇಶ್ ಪರ್ವತಮುಖಿ, ಸದಸ್ಯರಾದ ಕಾರ್ತಿಕ್ ವಿದ್ಯಾನಗರ, ಶೇಖರ್ ಕೇದಿಗೆಬನ, ಪ್ರಮುಖರಾದ ರವೀಂದ್ರ ಕುಮಾರ್ ರುದ್ರಪಾದ, ಎ.ಸುಬ್ರಹ್ಮಣ್ಯ ರಾವ್, ಗೋಪಾಲ ಎಣ್ಣೆಮಜಲು, ಲೋಕೇಶ್ ಬಿ.ಎನ್, ಪ್ರಕಾಶ್ ಸುಬ್ರಹ್ಮಣ್ಯ, ರತ್ನಾವತಿ ನೂಚಿಲ ಶಿ ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ಶ್ರೀ ದೇವಳದ ಯೋಗೀಶ್.ಎಂ.ವಿಟ್ಲ, ಭಾನುಮತಿ, ಪವಿತ್ರಾ, ಬಾಲಕೃಷ್ಣ ರೈ, ಸಂದೇಶ್ ನಾಯಕ್, ಬೆಳ್ಳಿ, ಸದಾನಂದ, ಅಶೋಕ್ ಅತ್ಯಡ್ಕ, ಎನ್.ಸಿ.ಸುಬ್ಬಪ್ಪ ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.
إرسال تعليق