ಕುಕ್ಕೆ ಶ್ರೀ ಸುಬ್ರಹಣ್ಯ ದೇವಳದ 2024-25 ನೇ ಸಾಲಿನ "ಚಂಪಾಷಷ್ಠಿ" ಜಾತ್ರಾ ಮಹೋತ್ಸವದ ಪೂರ್ವ ಸಿದ್ಧತೆಗಳ ಬಗ್ಗೆ ಇಲಾಖಾ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆ.


ಕುಕ್ಕೆ ಸುಬ್ರಹ್ಮಣ್ಯ;20,ದಿನಾಂಕ 26-11-2024 ರಂದು ಆರಂಭಗೊಂಡು ದಿನಾಂಕ 12-12-2024 ರ ವರೆಗೆ ಜರುಗಲಿದ್ದು, ಈ ಪೈಕಿ ಮುಖ್ಯ ರಥೋತ್ಸವಗಳು ದಿನಾಂಕ 05-12-2024 ರಿಂದ 07-12-2024 ರ ವರೆಗೆ ನಡೆಯಲಿದೆ. ಈ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಪೂರ್ವ ಸಿದ್ಧತೆಗಳ ಬಗ್ಗೆ ಇಲಾಖಾ ಅಧಿಕಾರಿಗಳ ಹಾಗೂ ಸಾರ್ವಜನಿಕರ ಸಭೆಯನ್ನು ಕು| ಭಾಗೀರಥಿ, ಮುರುಳ್ಯ, ಮಾನ್ಯ ಶಾಸಕರು, ಸುಳ್ಯ ವಿಧಾನಸಭಾ ಕ್ಷೇತ್ರ, ಸುಳ್ಯ ಇವರ ಅಧ್ಯಕ್ಷತೆಯಲ್ಲಿ ಹಾಗೂ ಜುಬಿನ್ ಮಹಾಪತ್ರ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಸಹಾಯಕ ಕಮೀಷನರ್, ಪುತ್ತೂರು ಉಪವಿಭಾಗ, ಪುತ್ತೂರು ಇವರ ಘನ ಉಪಸ್ಥಿತಿಯಲ್ಲಿ 
ಇಂದು ರಂದು ಅಪರಾಹ್ನ ಗಂಟೆ 3.00 ರಿಂದ ಶ್ರೀ ದೇವಳದ ಆಡಳಿತ ಕಛೇರಿಯ ಎರಡನೇ ಮಹಡಿಯಲ್ಲಿ ನಡೆಯಿತು.

ಶ್ರೀ ದೇವರ ಜಾತ್ರೋತ್ಸವ ಮತ್ತು ಸಂಬಂಧಿತ ಕಾರ್ಯಕ್ರಮಗಳು ಸುಗಮವಾಗಿ ನಡೆಸುವ ಕುರಿತಾಗಿ ಚರ್ಚಿಸಿ ಸಭೆಯಲ್ಲಿ ನಿರ್ಣಯಿಸಲಾಯಿತು.


1. ಆರಕ್ಷಕ, ಗೃಹರಕ್ಷಕ, ಸ್ವಯಂಸೇವಕ ಸಿಬ್ಬಂದಿಗಳಿಗೆ ಭೋಜನ ವ್ಯವಸ್ಥೆ :
ವಿಷಯ 1ವಾರ್ಷಿಕ ಜಾತ್ರೆ ಸಂಬಂಧ ಬಂದೋಬಸ್ತುಗಾಗಿ ಬರುವ ಹೆಚ್ಚುವರಿ ಆರಕ್ಷಕ ಸಿಬ್ಬಂದಿಗಳು, ಗೃಹರಕ್ಷಕ ದಳದ ಸಿಬ್ಬಂದಿಗಳು, ಇಲಾಖಾ ಅಧಿಕಾರಿ ವರ್ಗದವರು, ಬೇಂಡ್ ವಾಲಗ ಇತ್ಯಾದಿ ಕಲಾವಿದರು ಮತ್ತು ಇತರ ಸ್ವಯಂ ಸೇವಕರುಗಳಿಗೆ ಪ್ರತ್ಯೇಕ ಊಟೋಪಹಾರದ ವ್ಯವಸ್ಥೆ ಬಗ್ಗೆ,2. ಶುಚಿತ್ವ ಮತ್ತು ನೈರ್ಮಲೀಕರಣ ಬಗ್ಗೆ :
ದಿನಾಂಕ 06-12-2024 ರ ಪಂಚಮಿ ದಿನದಿಂದ 08-12-2024 ರ ಅವಕೃತ ದಿನದವರೆಗೆ ಶ್ರೀ ದೇವಳದ ಭೋಜನಶಾಲೆ ಹಾಗೂ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಭೋಜನಶಾಲೆಯಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ಭೋಜನ ಮತ್ತು ಉಪಹಾರದ ವ್ಯವಸ್ಥೆ ಮಾಡುವ ವಿಚಾರ ಹಾಗೂ ಊಟ ಬಡಿಸುವುದು, ಶುಚಿತ್ವದ ಬಗ್ಗೆ,
ಕ್ಷೇತ್ರದಲ್ಲಿ ಶುಚಿತ್ರ ಹಾಗೂ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಪ್ರತ್ಯೇಕವಾಗಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು, ಬೀದಿ ಶುಚಿತ್ವ ಮಾಡಿಸುವುದು. ತುರ್ತು ಚಿಕಿತ್ಸೆ ಬಗ್ಗೆ ಪ್ರತ್ಯೇಕ ವೈದ್ಯಕೀಯ ಶಾಪ್ ನಿರ್ವಹಣೆ ಇತ್ಯಾದಿ ಕ್ರಮಗಳ ಬಗ್ಗೆ.
3,ನಿರಂತರ ವಿದ್ಯುತ್ ಸರಬರಾಜು,
ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ದಿನಾಂಕ 05-12-2024 ರಿಂದ ದಿನಾಂಕ 07-12-2024 ರ ವರೆಗೆ
4. ಸಾರಿಗೆ ವಾಹನ ವ್ಯವಸ್ಥೆ ಮತ್ತು ಪಾರ್ಕಿಂಗ್ ವ್ಯವಸ್ಥೆ:
ಚಂಪಾಷಷ್ಠಿ ಮಹೋತ್ಸವ ಪ್ರಯುಕ್ತ ಜಿಲ್ಲೆಯ ನಾನಾ ಭಾಗಗಳಿಂದ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸುವ ಕುರಿತು ಹಾಗೂ ಸೂಕ್ತ ಕಡೆಗಳಲ್ಲಿ ವಾಹನ ಪಾರ್ಕಿಂಗ್ ವ್ಯವಸ್ಥೆಯ ಬಗ್ಗೆ ಹಾಗೂ ಖಾಸಗಿ ವಾಹನಗಳು ಹಾಗೂ ಕೆ.ಎಸ್.ಆರ್.ಟಿ.ಸಿ. ವಾಹನಗಳ ಪಾರ್ಕಿಂಗ್ ವ್ಯವಸ್ಥೆ ,
5. ಪೋಲೀಸ್ ಬಂದೋಬಸ್ತು ಮಾಡುವ ಬಗ್ಗೆ,
ಶ್ರೀ ಕ್ಷೇತ್ರದಲ್ಲಿ ಕಾನೂನು ಹಾಗೂ ಶಿಸ್ತು ಪಾಲನೆ ಸಂಬಂಧ ಸೂಕ್ತ ಬಂದೋಬಸ್ತು ನಿರ್ವಹಣೆ ಕುರಿತು, ಭದ್ರತಾ ವ್ಯವಸ್ಥೆಗೆ ಆಗಮಿಸುವ ಆರಕ್ಷಕ ಸಿಬ್ಬಂದಿಗಳಿಗೆ ವಾಸ್ತವ್ಯದ ವ್ಯವಸ್ಥೆ,
6. ವ್ಯಾಪಕ ಪ್ರಚಾರ,ಶ್ರೀ ದೇವಳದ ಜಾತ್ರಾ ಮಹೋತ್ಸವದ ರಥೋತ್ಸವ, ಉತ್ಸವಗಳ ಪ್ರಚಾರದ ಬಗ್ಗೆ,ಸಹಾಯಕಮ ನಿರ್ದೇಶಕರು, ವಾರ್ತಾ ಮತ್ತು ಜನಸಂಪರ್ಕ ಇಲಾಖೆ ಮಾಧ್ಯಮ ಮಿತ್ರರು 7. ತಾತ್ಕಾಲಿಕ ಸಂತೆ, ಅಂಗಡಿ ಮಳಿಗೆಗಳು :
ಮಹೋತ್ಸವ ಸಂದರ್ಭದಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವ ವಿಚಾರ.8. ಲಕ್ಷದೀಪೋತ್ಸವ ಮತ್ತು ಕುಣಿತ ಭಜನೆ :ಲಕ್ಷದೀಪದಲ್ಲಿ ಸಾರ್ವಜನಿಕರು ಹಚ್ಚುವ ಹಣತೆ ಬಗ್ಗೆ ಹಾಗೂ ಕುಣಿತ ಭಜನೆ ನಡೆಸುವ ಬಗ್ಗೆ
9. ಸ್ವಯಂ ಸೇವಕರ ನಿಯೋಜನೆ :ಜಾತ್ರಾ ಸಮಯದಲ್ಲಿ ಬರುವ ಭಕ್ತಾದಿಗಳ ಒತ್ತಡ ನಿಯಂತ್ರಣದ ಬಗ್ಗೆ ಪ್ರವೇಶ ಗೋಪುರ, ಹೊರಾಂಗಣ, ಆದಿ ಸುಬ್ರಹ್ಮಣ್ಯ, ಭೋಜನಶಾಲೆ ಇತ್ಯಾದಿ ಕಡೆಗಳಲ್ಲಿ ಸರದಿ ಸಾಲಿನ ವ್ಯವಸ್ಥೆ ಹಾಗೂ ಮೂಡುಬಾಗಿಲು. ಪಡುಬಾಗಿಲು, ಲಗೇಜು ಕೊಠಡಿ, ಮಾಹಿತಿ ಕೇಂದ್ರಗಳಲ್ಲಿ ಸ್ವಯಂ ಸೇವಕರ ನಿಯೋಜನೆಯೊಂದಿಗೆ ಸೂಕ್ತ ವ್ಯವಸ್ಥೆ ಮಾಡುವ ಕುರಿತು.10. ಭಕ್ತಾಧಿಗಳಿಗೆ ವಸತಿ ವ್ಯವಸ್ಥೆ ಕಲ್ಪಿಸುವ ಬಗ್ಗೆ :ಭಕ್ತಾಧಿಗಳ ವಸತಿಗಾಗಿ ಖಾಸಾಗಿ ವಸತಿಗೃಹಗಳಲ್ಲಿ ಕೊಠಡಿ ನೀಡುವ ಬಗ್ಗೆ,
11, ಕೃಷಿಮೇಳ :ಶ್ರೀ ದೇವಳದ ಮಹೋತ್ಸವ ಸಂದರ್ಭದಲ್ಲಿ ಕೃಷಿ ಮೇಳದಲ್ಲಿ ಆಹಾರಮೇಳ, ಆರೋಗ್ಯಮೇಳ ರಚಿಸಲು ತೀರ್ಮಾನಿಸುವ ವಿಚಾರ,
ಭಕ್ತಾದಿಗಳು ಬೀದಿ ಉರುಳು ಸೇವೆ ಮಾಡುವ ಸಂದರ್ಭದಲ್ಲಿ ನೂಕುನುಗ್ಗಲು ಆಗದಂತೆ ಅರಕ್ಷಕ ಮತ್ತು| ಗೃಹರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸಿಕೊಂಡು ಸೂಕ್ತ ಕ್ರಮಕೈಗೊಳ್ಳುವ ವಿಚಾರ ಹಾಗೂ ಮಹೋತ್ಸವದ ಸಂಬಂಧ ಚೌತಿ, ಪಂಚಮಿ ಮತ್ತು ಷಷ್ಠಿ ದಿನದಂದು ಮಧ್ಯಾಹ್ನ ಶ್ರೀ ದೇವಳದ ಹೊರಾಂಗಣದಲ್ಲಿ ಭಕ್ತಾದಿಗಳು ಸ್ವಇಚ್ಛೆಯಿಂದ ನಡೆಸುತ್ತಿರುವ ಎಡೆಸ್ನಾನಕ್ಕೆ ಅವಕಾಶ ನೀಡುವ ವಿಚಾರ
13. ಬ್ರಹ್ಮರಥೋತ್ಸವ ಸಂದರ್ಭದ ಕ್ರಮ :
ಬ್ರಹ್ಮರಥೋತ್ಸವದ ಸೇವಾರ್ಥಿಗಳಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ ಪಾಸ್ ಹಂಚಿಕೆ ಲಗ್ಗೆ ಹಾಗೂ ರಥೋತ್ಸವ ಜರಗುವ ಸಂದರ್ಭದಲ್ಲಿ ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಳ್ಳಲು ರಥದ ಸುತ್ತಲೂ ಸೂಕ್ತ ಬಂದೋಬಸ್ತು ವ್ಯವಸ್ಥೆ ಕಲ್ಪಿಸುವ ಬಗ್ಗೆ.
14. ಭಕ್ತಾಧಿಗಳ ಅನುಕೂಲಕ್ಕಾಗಿ ವಿಶೇಷ ಪ್ರಸಾದ ಭೋಜನಾ ವ್ಯವಸ್ಥೆ & ಶುಚಿತ :
ದಿನಾಂಕ 05-12-2024 ರ ಪಂಚಮಿ ದಿನದಿಂದ 08-12-2024 ರ ಅವಕೃತ ದಿನದವರೆಗೆ ಶ್ರೀ ದೇವಳದ ಷಣ್ಮುಖಪ್ರಸಾದ ಭೋಜನಶಾಲೆ ಹಾಗೂ ಆದಿಸುಬ್ರಹ್ಮಣ್ಯ ಸರ್ಪಸಂಸ್ಕಾರ ಭೋಜನಶಾಲೆಯಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಪ್ರಸಾದ ಭೋಜನ ಮತ್ತು ಉಪಹಾರದ ವ್ಯವಸ್ಥೆ ಮಾಡುವ ವಿಚಾರ ಹಾಗೂ ಊಟ ಬಡಿಸುವುದು. |ಶುಚಿತ್ವ ಇತ್ಯಾದಿ ವ್ಯವಸ್ಥೆಯನ್ನು ನಿರ್ವಹಿಸುವ ವಿಚಾರ.ಕ್ಷೇತ್ರದಲ್ಲಿ ಶುಚಿತ್ವ ಹಾಗೂ ನೈರ್ಮಲ್ಯವನ್ನು ಕಾಪಾಡುವ ದೃಷ್ಟಿಯಿಂದ ಸೂಕ್ತ ಕಡೆಗಳಲ್ಲಿ ಪ್ರತ್ಯೇಕವಾಗಿ ತಾತ್ಕಾಲಿಕ ಶೌಚಾಲಯಗಳನ್ನು ನಿರ್ಮಿಸುವುದು. ಬೀದಿ ಶುಚಿತ್ರ ಮಾಡಿಸುವುದು, ತುರ್ತು ಚಿಕಿತ್ಸೆ ಬಗ್ಗೆ ಪ್ರತ್ಯೇಕ ವೈದ್ಯಕೀಯ ಶಾಪ್ ನಿರ್ವಹಣೆ ಇತ್ಯಾದಿ ಕ್ರಮಗಳ ಬಗ್ಗೆ,
15. ನೀರು ಸರಬರಾಜು ವ್ಯವಸ್ಥೆ:ಚಂಪಾಷಷ್ಠಿ ಮಹೋತ್ಸವ ಸಂಬಂಧ ಆಗಮಿಸುವ ಭಕ್ತಾಧಿಗಳ ಅನುಕೂಲಕ್ಕಾಗಿ ಅಗತ್ಯ ಕಡೆಗಳಲ್ಲಿ ಶುದ್ಧ | ಕುಡಿಯುವ ನೀರಿನ ವ್ಯವಸ್ಥೆ ಹಾಗೂ ನಿರಂತರ ನೀರು ಸರಬರಾಜು ವ್ಯವಸ್ಥೆ ಮಾಡುವ ಬಗ್ಗೆ,16. ಕುಮಾರಧಾರ ಸ್ನಾನ ಘಟ್ಟ ಮತ್ತು ಆದಿಸುಬ್ರಹಣ್ಯ ಹೊಳೆಯ ಹೂಳೆತ್ತುವುದು :( ಆದಿಸುಬ್ರಹ್ಮಣ್ಯ ದರ್ಪಣ ತೀರ್ಥ ನದಿ ಹಾಗೂ ಕುಮಾರಧಾರ ನದಿಯ ಸ್ನಾನ ಘಟ್ಟದ ಬಳಿ ಹೊಳೆಯ ಹೂಳೆತ್ತಲು ಕ್ರಮ ಕೈಗೊಳ್ಳವ ಕುರಿತು.
17. ಮದ್ಯಪಾನ ನಿಷೇದ :ಮದ್ಯಪಾನ ನಿಷೇದ ಮಾಡುವ ಬಗ್ಗೆ ಕ್ರಮ ಕೈಗೊಳ್ಳುವುದು,
18. ವಿಶೇಷ ಸಿಡಿಮದ್ದು ಪ್ರದರ್ಶನ :ಸಿಡಿಮದ್ದು ಪ್ರದರ್ಶನದ ನಡೆಸಲು ಸೂಕ್ತ ಸ್ಥಳಾವಕಾಶ ಕಲ್ಪಿಸುವ ಹಾಗೂ ಸಿಡಿಮದ್ದು ಪ್ರದರ್ಶನದ ಸಮಯದಲ್ಲಿ ಯಾವುದೇ ಬೆಂಕಿ ಅವಘಡ ಸಂಭವಿಸದಂತೆ ಅಗ್ನಿಶಾಮಕ ವಾಹನವನ್ನು ನಿಯೋಜಿಸಲು ಕ್ರಮವಹಿಸುವ ಬಗ್ಗೆ ,19. ರಥ ಸುಸ್ಥಿತಿಯ ಬಗ್ಗೆ ದೃಢೀಕರಣ:ಚಂಪಾಷಷ್ಠಿ ಮಹೋತ್ಸವದ ರಥಗಳು ಯೋಗ್ಯವಾಗಿರುವ ಬಗ್ಗೆ ಪರಿಶೀಲಿಸಿ ದೃಢೀಕರಣ ಪತ್ರ ನೀಡುವ ಬಗ್ಗೆ ಹಾಗೂ ತಮ್ಮ ವ್ಯಾಪ್ತಿಗೆ ಒಳಪಟ್ಟ ರಸ್ತೆಗಳ ಸಣ್ಣಪುಟ್ಟ ದುರಸ್ತಿಗಳ ಬಗ್ಗೆ,
20. ದೀಪಾಲಂಕರ ಶ್ರೀ ದೇವಳದ ಚಂಪಾಷಷ್ಠಿ ಮಹೋತ್ಸವದ ಪ್ರಯುಕ್ತ ವಿದ್ಯುದ್ದೀಪಾಲಂಕಾರದ ಬಗ್ಗೆ.21. ಸಿಸಿ ಟಿವಿ ಅಳವಡಿಕೆ ಶ್ರೀ ದೇವಳದ ಚಂಪಾಷಷ್ಠಿ ಮಹೋತ್ಸವದ ವೇಳೆ ಬಂದೋಬಸ್ತ್ ವ್ಯವಸ್ಥೆಗಾಗಿ ಬಾಡಿಗೆ ನೆಲೆಯಲ್ಲಿ ಸಿ.ಸಿ. ಕ್ಯಾಮೆರಾ ಒದಗಿಸಿ ಅಳವಡಿಸುವ ಬಗ್ಗೆ:
ಸಾರ್ವಜನಿಕರು ಊರ ನಾಗರಿಕರ ಸಮಕ್ಷಮದಲ್ಲಿ ಎಲ್ಲ ವಿಚಾರಗಳ ಬಗ್ಗೆ ಸಮಗ್ರ ಚರ್ಚೆಗಳು ನಡೆದು ಪೂರ್ವಭಾವಿಯಾಗಿ ಸಭೆ ನಡೆಯಿತು ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಎ ಇ ಓ ಯೇಸುರಾಜ್ ,ಸಂಬಂಧಪಟ್ಟ ಎಲ್ಲಾ ಇಲಾಖೆಯ ಅಧಿಕಾರಿಗಳು, ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಸಿಬ್ಬಂದಿಗಳು, ಊರಿನ ಗಣ್ಯರು, ಉಪಸ್ಥಿತರಿದ್ದರು.


Post a Comment

Previous Post Next Post

Featured Posts

Post ADS 1

Main Slider

Post ADS 2