ಕುಕ್ಕೆ ಸುಬ್ರಹ್ಮಣ್ಯ ಸಮೀಪ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ.

  • ಕಾಲಿಂಗ ಸರ್ಪದ ನೋಟ 
  • ಆಹಾರ ಅರಸುತ್ತಾ ಬಂದಿದೆ 

 ಕುಕ್ಕೆ ಸುಬ್ರಹ್ಮಣ್ಯ: ಕಾಳಿಂಗ ಸರ್ಪವು ಜಗತ್ತಿನ ಅತಿ ಉದ್ದವಾದ ವಿಷಕಾರಿ ಹಾವು, ಇಂತಹ ಬೃಹತ್ ಗಾತ್ರದ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕುಕ್ಕೆ ಸುಬ್ರಹ್ಮಣ್ಯದ ಕೈಕಂಬದಲ್ಲಿ ಪತ್ತೆಯಾಗಿದೆ.



ಮನೆಯೊಂದರ ಬಳಿ ಈ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಕೆಲ ಹೊತ್ತು ಆತಂಕದ ಸೃಷ್ಠಿಸಿಸಿದೆ. ಆಹಾರವನ್ನು ಹರಿಸಿಕೊಂಡು ಈ ಕಾಳಿಂಗ ಸರ್ಪ ಬಂದಿರಬಹುದೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.



ಈ ಹಾವಿನ ಗಾತ್ರ ನೋಡಿದಾಗಲೇ ಮೈಜುಂ ಎನ್ನುವಂತಿದೆ. ಸ್ಥಳೀಯರು ಇದರ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆರೆದಿದ್ದವರು ಯಾರು ತೊಂದರೆ ಮಾಡದ ಕಾರಣ ಅಲ್ಲೇ ಸಮೀಪದ ಕಾಡಿನತ್ತ ತೆರಳಿರುವುದಾಗಿ ಮಾಹಿತಿ ಲಭಿಸಿದೆ. 


ಈ ಬಗ್ಗೆ ವನ್ಯ ಜೀವಿ ಸಂರಕ್ಷಣಕಾರ ಭುವನ ಕೈ ಕಂಬ ಅವರ ನ್ಯೂಸ್ ಪ್ಯಾಡ್  ಜೊತೆ ಮಾತನಾಡಿ, ಈ ಕಾಳಿಂಗ ಸರ್ಪ ಬಹಳ ಕಪ್ಪಾಗಿದೆ, ಇದಕ್ಕೆ ಕಾರಣ ಇತ್ತೀಚೆಗೆ ಈ ಹಾವು ತನ್ನ ಪೊರೆಯನ್ನು ಇತ್ತೀಚೆಗೆ ಕಳಚಿದೆ ,ಹೀಗಾಗಿ ಈ ಸಂದರ್ಭದಲ್ಲಿ ಹಸಿವು ಹೆಚ್ಚಾಗಿರುತ್ತದೆ,ಹೀಗಾಗಿ ಆಹಾರ ಹರಸಿ ಬಂದಿರುವುದು ಎಂದಿದ್ದಾರೆ.



ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಬಳಿ ಮಾಹಿತಿ ಕೇಳಿದ್ದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ.


ಈ ವಿಡಿಯೋ ವೀಕ್ಷಿಸಿ 


Post a Comment

أحدث أقدم

Featured Posts

Post ADS 1

Main Slider

Post ADS 2