ಚೇರು ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರ ನಿಯೋಜನೆಗೆ ಒತ್ತಾಯಿಸಿ ಪ್ರತಿಭಟನೆಬಿಳಿನೆಲೆ ಗ್ರಾಮ ಪಂಚಾಯಿತಿ ಕಚೇರಿಯ ಜಗಲಿಯಲ್ಲಿ  ಪೋಷಕರಿಂದ ಪ್ರತಿಭಟನೆ.


ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಚೇರು ಸರ್ಕಾರಿ ಶಾಲೆಗೆ ಅತಿಥಿ ಶಿಕ್ಷಕರನ್ನು ನಿಯೋಜಿಸುವಂತೆ ಒತ್ತಾಯಿಸಿ ಶಾಲೆಯ ವಿದ್ಯಾರ್ಥಿಗಳ ಪೋಷಕರು ಹಾಗೂ ಊರವರು , ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆ ವತಿಯಿಂದ ಬಿಳಿನೆಲೆ ಗ್ರಾಮ ಪಂಚಾಯಿತಿ ಕಚೇರಿಯ ಜಗುಲಿಯಲ್ಲಿ ಘಟನೆ ಶುಕ್ರವಾರ ಅನಿದಿಷ್ಟಾವಧಿ ಮುಷ್ಕರ ಪ್ರತಿಭಟನೆ ಆರಂಭವಾಗಿದೆ. 


      ಎಸ್ ಡಿ ಎಂ ಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕ ವಿನೀಶ್ ಬಿಳಿನೆಲೆ ಮಾತನಾಡಿ,ವಿದ್ಯಾರ್ಥಿಗಳ ಕೊರತೆಯಿಂದ ಈ ವರ್ಷದ ಶೈಕ್ಷಣಿಕ ಆರಂಭದಲ್ಲಿ ಶಾಲೆ ಮುಚ್ಚುವ ಹಂತಕ್ಕೆ ತಲುಪಿದ್ದಾಗ ಊರವರು ಇಲಾಖೆಯ ಗಮನ ಸೆಳೆದು ಸ್ಥಳಕ್ಕೆ ಬಂದ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಆರ್ ಒರ್ವ ಶಿಕ್ಷಕರು ಹಾಗೂ ಒರ್ವ ಅತಿಥಿ ಶಿಕ್ಷಕರ ನಿಯೋಜಿಸುವ ಬಗ್ಗೆ ಭರವಸೆ ನೀಡಿದ್ದರು. ಅದರಂತೆ ಒರ್ವ ಖಾಯಂ ಶಿಕ್ಷಕರನ್ನು ನಿಯೋಜಿಸಲಾಗಿತ್ತು. ಬಳಿಕ ಊರವರು ವಿದ್ಯಾರ್ಥಿಗಳನ್ನು ಸೇರ್ಪಡೆಗೊಳಿಸಿದ್ದರು. ಆದರೆ ಹಲವು ತಿಂಗಳು ಕಳೆದರೂ ಅತಿಥಿ ಶಿಕ್ಷಕರ ನಿಯೋಜಿಸದೇ ಇರುವುದರಿಂದ ಆರಂಭದಲ್ಲಿ ೧೩ ವಿದ್ಯಾರ್ಥಿಗಳಿದ್ದ ಇದೀಗ ೪ ಕ್ಕೆ ಇಳಿದಿದೆ. ಇದಕ್ಕೆಲ್ಲ ಇಲಾಖೆಯ ಕಾರಣವಾಗಿದೆ. ಇಲ್ಲಿರುವ ಖಾಯಂ ಶಿಕ್ಷಕರು ಕರ್ತವ್ಯ ನಿಮಿತ್ತ ಹೊರ ಹೋಗುವ ಸಂದರ್ಭದಲ್ಲಿ ಇಲ್ಲಿ ಶಿಕ್ಷಕರಿಲ್ಲದೇ ಸಮಸ್ಯೆ ಆಗುತ್ತಿದೆ ತಕ್ಷಣ ಖಾಯಂ ಶಿಕ್ಷಕರನ್ನು ನೀಡಬೇಕು ಎಂದು ಆಗ್ರಹಿಸಿದ್ದಾರೆ. 
    ಶುಕ್ರವಾರ ಸಂಜೆಯವರೆಗೆ ನಡೆದ ಪ್ರತಿಭಟನೆ ಸೋಮವಾರದಿಂದ ಮತ್ತೆ ಅತಿಥಿ ಶಿಕ್ಷಕ ನಿಯೋಜಿಸುವ ಬೇಡಿಕೆ ಇಡೇರುವ ತನಕ ಪ್ರತಿಭಟನೆ ಮುಂದುವರಿಯಲಿದೆ ತಿಳಿಸಿದರು.
   ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷೆ ಪುಷ್ಪಲತಾ, ಉಪಾಧ್ಯಕ್ಷೆ ಸೌಮ್ಯ, ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ ಸಂಚಾಲಕ ವಿನೀಶ್ ಬಿಳಿನೆಲೆ , ನಿರ್ದೇಶಕ ರಾಮಕೃಷ್ಣ ಹೊಳ್ಳಾರು , ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಸುಕುಮಾರ ಚೇರು, ಊರವರಾದ ಮಮತಾ ಚೇರು, ರಾಜೇಶ್ವರಿ, ಗಿರಿಜಾ ಗೋಪಾಳಿ, ಅಕ್ಷತಾ ಗೋಪಾಳಿ, ತೀರ್ಥ ಗೋಪಾಳಿ, ಲಕ್ಷ್ಮೀ ಗೋಪಾಳಿ, ವಿಮಲ ಗೋಪಾಳಿ, ದೇವಪ್ಪ ಗೋಪಾಳಿ, ಹರೀಶ್ ಚೇರು, ಪುರಂದರ ಗೋಪಾಳಿ, ಪ್ರವೀಣ್ ಭಾಗ್ಯ, ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Post a Comment

أحدث أقدم

Featured Posts

Post ADS 1

Main Slider

Post ADS 2