ಹೆಣ್ಣು ಮಕ್ಕಳ ರಕ್ಷಣೆ -ಭದ್ರತೆ ಹಾಗೂ ಅತ್ಯಾಚಾರಿಗಳಿಗೆ ಕಾನೂನು ಅಡಿಯಲ್ಲಿ ಶಿಕ್ಷೆ ಬೇಡಿಕೆ ಇಟ್ಟು ಪಾದಯಾತ್ರೆ.






ಪ್ರವೀಣ್ ಮಂಗಳೂರು .ಮೂಸ ಶರೀಫ್ ರವರ ನಾಯಕತ್ವದಲ್ಲಿ ಭೇಟಿ ಬಚಾವೋ ಎಂದು "ದಕ್ಷಿಣದಿಂದ ಉತ್ತರಕ್ಕೆ" - (ಮಂಗಳೂರಿನಿಂದ ರಿಂದ ದೆಹಲಿ) ಸುಮಾರು 2,600 ಕಿಲೋಮಿಟರ್ ಪಾದಯಾತ್ರೆ ನಡೆಸುತ್ತಿದ್ದಾರೆ.

ಇಡೀ ವಿಶ್ವಕ್ಕೆ ಸಂಸ್ಕೃತಿ ಮತ್ತು ಸಂಸ್ಕಾರಗಳ ಪಾಠ ಹೇಳಿಕೊಟ್ಟ ನಮ್ಮ ಭವ್ಯ ಭಾರತದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಒಂದು ಹೆಣ್ಣು ಓದಿನ ವಿಚಾರವಾಗಿಯೋ, ಅಥವಾ ಕೆಲಸದ ವಿಚಾರವಾಗಿಯೋ, ಅಥವಾ ಒಂದು ವ್ಯಾಪಾರದ ವಿಚಾರವಾಗಿಯೋ, ಅಥವಾ ಇನ್ಯಾವುದೋ ವಿಚಾರವಾಗಿಯೋ ಮನೆಯಿಂದ ಹೊರಗಡೆ ಹೋದರೆ ಆಕೆ ಕ್ಷೇಮವಾಗಿ ಮತ್ತೆ ಮನೆಗೆ ಬರುತ್ತಾಳೆ ಎಂಬ ನಂಬಿಕೆ ಹಾಗೂ ಭರವಸೆ ಆ ಕುಟುಂಬಗಳಿಗೆ ಇಲ್ಲ. ಯಾಕೆ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ಇಲ್ಲ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮಾಡಿದವನಿಗೆ ಯಾಕೆ ನಮ್ಮ ದೇಶದ ಕಾನೂನು ಸುವ್ಯವಸ್ಥೆಯಲ್ಲಿ ಕಠಿಣವಾದ ಶಿಕ್ಷೆ ಇಲ್ಲ?. ದೇಶದಲ್ಲಿ ಸಮಾನತೆ ಇಲ್ವ?. ಈ ನಮ್ಮ ಭಾರತ ದೇಶದಲ್ಲಿ ಒಬ್ಬ ಪುರುಷ ಎಷ್ಟು ಸ್ವತಂತ್ರವಾಗಿ ಜೀವನ ಮಾಡುತ್ತಾನೋ ಹಾಗೆ ಮಹಿಳೆಯು ಕೂಡ ಘನತೆ ಮತ್ತು ಗೌರವದಿಂದ ಹಾಗೂ ಪ್ರತಿಷ್ಠೆಯಿಂದ ಸಮಾಜದಲ್ಲಿ ಬದುಕುವಂತ ವ್ಯವಸ್ಥೆಯನ್ನು ನಿರ್ಮಾಣ ಮಾಡಿ ಕೊಡುವುದು ಸರ್ಕಾರದ ಜವಾಬ್ದಾರಿಯಲ್ಲವೇ. 

ಹೆಸರಿಗಷ್ಟೇ ಈ ಭೇಟಿ ಬಚಾವೋ ಎಂಬ ಯೋಜನೆ ಈ ಯೋಜನೆ ದೇಶದ ಯಾವುದೇ ಹೆಣ್ಣು ಮಕ್ಕಳಿಗೆ ನೆರವಾಗುತ್ತಿಲ್ಲ. ವಿದೇಶಗಳಲ್ಲಿ ಹೆಣ್ಣು ಮಕ್ಕಳಿಗೆ ಇರುವಂತಹ ರಕ್ಷಣೆ ನಮ್ಮ ದೇಶದಲ್ಲಿ ಯಾಕೆ ಇಲ್ಲ?. ಪ್ರತಿ ವರ್ಷ 35 ಸಾವಿರಕ್ಕೂ ಅಧಿಕ ಹೆಣ್ಣುಮಕ್ಕಳು ಅತ್ಯಾಚಾರಕ್ಕೆ ಒಳಗಾಗುತ್ತಿದ್ದಾರೆ ಇದೇ ರೀತಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ಮೇಲೆ ಲೈಂಗಿಕ ಅತ್ಯಾಚಾರಗಳು ಮುಂದುವರೆದರೆ ಕೊನೆಗೆ ನಾವು ಹೆಣ್ಣು ಮಕ್ಕಳನ್ನು ಮ್ಯೂಸಿಯಂನಲ್ಲಿ ನೋಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ. 
ಇದರ ಸಲುವಾಗಿ ನಮ್ಮ ದೇಶದ ಪ್ರಧಾನ ಮಂತ್ರಿಗಳನ್ನು ದೆಹಲಿಯಲ್ಲಿ ಅವರ ಕಚೇರಿಯಲ್ಲಿ ಭೇಟಿಯಾಗಿ ನಮ್ಮ ದೇಶದಲ್ಲಿ ಹೆಣ್ಣು ಮಕ್ಕಳ ರಕ್ಷಣೆಗಾಗಿ ಈ "ಬೇಟಿ ಬಚಾವೋ" ಎಂಬ ಯೋಜನೆಯನ್ನು ಹೆಚ್ಚು ಬಲಿಷ್ಠ ಗೊಳಿಸಿ ದೇಶದ ಯಾವುದೇ ಒಂದು ಹೆಣ್ಣು ಅತ್ಯಾಚಾರಕ್ಕೆ ಒಳಗಾಗದೆ ಸಮಾಜದಲ್ಲಿ ಘನತೆ, ಗೌರವ ಮತ್ತು ಪ್ರತಿಷ್ಠೆಯಿಂದ ಬದುಕುವಂತೆ ಹಾಗೂ ಹೆಣ್ಣನ್ನು ಹೆತ್ತ ತಂದೆ ತಾಯಿಯು ಕೂಡ ನೆಮ್ಮದಿಯಿಂದ ಹಾಗೂ ಇಡೀ ದೇಶವೇ ಒಂದು ಹೆಣ್ಣನ್ನು ಗೌರವದಿಂದ ಕಾಣುವಂತೇ ಈ ಯೋಜನೆಯನ್ನು ರೂಪಿಸಬೇಕೆಂದು ದೇಶಕ್ಕೆ ತಾಯಿ ಸ್ಥಾನದಲ್ಲಿರುವಂತಹ ಪ್ರಧಾನಮಂತ್ರಿಗಳನ್ನು ಮನವಿ ಮಾಡಲಿದ್ದೇವೆ ಎಂದು ಮಾದ್ಯಮಕ್ಕೆ ಮಾಹಿತಿ ನೀಡಿದ್ದಾರೆ. 

 ಪ್ರವೀಣ್ ಮಂಗಳೂರು, ಮೂಸ ಷರೀಫ್ ನಾಯಕತ್ವದಲ್ಲಿ, ನೌಫಲ್ ಅಬ್ಬಾಸ್,ಆರಿಫ್, ಶುಕೂರ್, ಬಾಲಕೃಷ್ಣ, ಹಂಝ ಪಾದಯಾತ್ರೆ ದೆಹಲಿ ತನಕ ನಡೆಯಲಿದೆ ನವಂಬರ್ ಐದರಂದು ಸುಮಾರು 350 ಕಿಲೋ ಮೀಟರ್ ಕ್ರಮಿಸಿದ್ದೇವೆ ಮುಂದೆ ದೆಹಲಿಯತ್ತ ನಮ್ಮ ಪಾದಯಾತ್ರೆ ಮುಂದುವರೆಯಲಿದೆ ಎಂದು ಮಾಹಿತಿ ನೀಡಿದರು .

Post a Comment

أحدث أقدم

Featured Posts

Post ADS 1

Main Slider

Post ADS 2